Sunday, January 4, 2015

ಕನ್ನಡ ೫ - ಆಂಜನೇಯ

ಭಕ್ತಿಯ,ಶಕ್ತಿಯ,ಯುಕ್ತಿಯ 
ಪರಮಾವಧಿಯೇ ಅಂಜನಿಸುತ ಆಂಜನೇಯ
ರಾಮನ ಪೂಜಿಸಲೆಂದೇ ಜನಿಸಿದ
ಆ ಶಿವನ ಅವತಾರ ವರ್ಣನಾತೀತ

ಸದಾ ಧ್ಯಾನದೊಳು ಮುಳುಗಿರುವ 
ಧ್ಯಾನಕೇಂದ್ರದದಾವುದು ಎಂದು ಕೇಳಿದ 
ಸತಿಯ ಪ್ರಶ್ನೆಯ ಉತ್ತರವೇ ಮಹಾವಿಷ್ಣು
ಈ ಲೀಲೆಯ ಕಥೆಯೇ ರಾಮಾಯಣ?

ಪರಮೇಶ್ವರನನ್ನು ಸೇರಲು ಅರಿಯಲು 
ಜ್ಞಾನ ಮಾರ್ಗದೊಳು ನಡೆದ ಋಷಿಗಳಿಗೆ
ಭಕ್ತಿ ಮಾರ್ಗದ ಶಕ್ತಿಯನ್ನು 
ತೋರಿಸಲು ಜನ್ಮಿಸಿದೆಯಾ ಭಜರಂಗಿ?

ವಿಶ್ವದೊಳು ಪವಿತ್ರತೆವೆಂಬುದಿದ್ದರೆ 
ಅದು ಹುಟ್ಟುವುದೇ ಆಂಜನೇಯನಿಂದ 
ನಿನ್ನ ಭಕ್ತಿಗೆ ಸಾಟಿಯಿಲ್ಲ 
ನಿನ್ನ ಶ್ರದ್ದೆಗೆ ಮಿತಿಯೇ ಇಲ್ಲ

ನಿನ್ನಂತ ವೀರ ಮತೊಬ್ಬನಿಲ್ಲ
ಋಷಿ ಮುನಿ ದೇವತೆಗಳನ್ನೂ ಬಿಡದ 
ಶನಿಮಹಾತ್ಮನ ವಕ್ರದೃಷ್ಟಿಯನ್ನೂ ಮೀರಿದ 
ಅಮರಾಮರ ಚಿರಂಜೀವಿ ನೀನು 

ನಿನ್ನ ಲೀಲೆ ಅಪಾರ 
ನಿನ್ನ ಶಕ್ತಿ ಅಪಾರ 
ನಿನ್ನ ಭಕ್ತಿ ಅಪಾರ 
ನಿನ್ನ ಚರಣಕಮಲದೊಳು 
ಆಶ್ರಯವನ್ನ್ ನೀಡುವೆಯಾ
ಮಹಾವೀರ ಅಂಜನಿಸುತ ಆಂಜನೇಯ

                         -  ಶಶಾಂಕ್ ಕೆ ಡಿ (೨೭-೦೨-೧೪)

No comments:

Post a Comment