Sunday, January 4, 2015

ಕನ್ನಡ ೧ - ಮನಸ್ಸು ಭಾರವಾದಾಗ

ನಿರ್ಭಾವದ ಕಗ್ಗತ್ತಿಲಿನಲ್ಲಿ ಕಳೆದಿದ್ದ
ಮನಸ್ಸೊಂದು ಯೋಚನೆಯ
ಬೆಳಕಿನೆಡೆಗೆ ತೇಲುತ ಹೊರಟಾಗ
ಹೊಮ್ಮಿದವೀ ಪದಗಳು.

ಬಿಟ್ಟರೂ ಹಿಡಿಯಬೇಕಾದ,
ಹಿಡಿದರೂ ನಡೆಯಲಾಗದ ದಾರಿ,
ಸುಂಕವಿಲ್ಲದ ಈ ದಾರಿ,
ದಾರಿಗಿಲ್ಲದ ಅಂತರಾರ್ಥ.

ಕಾಡುವ ಮನಸ್ಸಿದು ಚಿಂತೆಯ
ಸಾಗರದಲ್ಲಿ ಮುಳುಗಲೊರಟಿದೆ,
ಮನಸ್ಸಿಗಿಲ್ಲದ ಆ ಚಾಟಿ,
ಆದನ್ನ ಅರಿಯಲಿಲ್ಲದ ಸಮಯ.

ಭವಿಷ್ಯವಿಲ್ಲದ ಯೋಚನೆ,
ಯೋಚನೆಗಿಲ್ಲದ  ಕಲ್ಪನೆ,
ಕಲ್ಪನೆಗಿಲ್ಲದ ಧೃಡತೆ,
ಧೃಡತೆಗಿಲ್ಲದ ಆಸೆ.

ಆಸೆ ಹುಟ್ಟದಿರುವ ಪರಿಸ್ಥಿತಿ, 
ಪರಿಸ್ಥಿತಿ ಬದಲಿಸಲಾಗದ ನಿಸ್ಸಹಾಯಕತೆ. 
ಹಣೆಬರಹವೆನ್ನಲೋ,ವಿಧಿಯಾಟವೆನ್ನಲೋ,
ತಿಳಿಯದೀ ನಿಘಂಟು.

ಆಟ ಅವನಾಡಿಸುವ ಆಟ,
ಮುಗಿಯಲಾರದೀ ಆಟ,
ಬಿಡಲೆನ್ನದೀ ಆಟ,
ಅದೇ ದೇವರ ಆಟ.

- ಶಶಾ೦ಕ್ . ಕೆ . ಡಿ(೧೬-೦೧-೨೦೧೪) 

No comments:

Post a Comment