Sunday, January 4, 2015

ಕನ್ನಡ ೩ - ಮೂಗುತಿ ಸುಂದರಿ

ಪೃಥ್ವಿಯ ವರಪುತ್ರಿನೀ ಹಿರಣಾಕ್ಷಿ
ನಿನ್ನ ನೋಟದ ಕಿರಣಗಳಿಂದ
ಅರಳಿದವೀ ಕಮಲ ಪುಷ್ಪಗಳು
ಮೂಗುತಿ ಸುಂದರಿನೀ
ನಿನ್ನ ಮಾಯೆಯನ್ ಜಯಿಸುವುದುಂಟೆ?

ಕಮಲತೆಯ ಕಮಲಾಂಗಿ ನೀ
ನಿನ್ನ ವಯ್ಯಾರವ ನೋಡಿ
ನಾಚಿದಳು ಹಂಸರಾಣಿ
ನಿನ್ನ ಬಿಂಬವ ನೋಡಿ
ಪ್ರತಿಬಿಂಬವ ಸೃಷ್ಟಿಸಲಾಗದೆ
ಸಪ್ಪಾಯಿತು ಕನ್ನಡಿ

ನಿನ್ನ ಸೌಂದರ್ಯದ ಛಾಯೆಯೊಳು
ಸೋತು,ಮೈಮರೆತು,ಮನಮರೆತು
ಹುಚ್ಚನಾಗಿ ತಿರುಗತಿರುವ ನನ್ನ
ನೋಡಿ ನಿನಗೆ ಕರುಣೆ ಬರಲಿಲ್ಲವೇ?

ಯುಗ ಯುಗವೇ ಕಳೆಯಲಿ
ಸ್ವರ್ಗ ಮೋಕ್ಷವನೆಲ್ಲ ತ್ಯಜಿಸಿ
ಕಾದಿರುವ ನನ್ನನೀ ಮೆಚ್ಚುವುದಿಲ್ಲವೇ?

ನಿನ್ನ ನಗುವೊಂದೇ ಸಾಕು
ನನ್ನ ದಾಸನಾಗಿಸಲು
ನೀ ಬರದಿದ್ದರೂ, ನೀ ಮೆಚ್ಚದಿದ್ದರೂ
ನಿನ್ನ ಕಲ್ಪನೆಯೊಂದೇ ಸಾಕು
ಕಾಲವನ್ ಕಳೆದು ಅಸುನೀಗಲು.

                              - ಶಶಾಂಕ್. ಕೆ. ಡಿ (೨೭-೦೨-೧೪)

No comments:

Post a Comment