Sunday, January 4, 2015

ಕನ್ನಡ ೨ - ಕರ್ಮವೆಂಬ ಮರ್ಮ

ಅಖಂಡ ಅಕ್ಷೂಣ ಬ್ರಹ್ಮಾಂಡದೊಳಗಿನ 
ನಿರಂತ ನಿರಾಕರ ನಿಸ್ಸೀಮ ವಿಶ್ವದಲ್ಲಿರುವ 
ಸೌರಮಂಡಲದ ಅಧಿಪತಿ ಸೂರ್ಯದೇವನ 
ಅಭಯ ವರವನ್ನೊತ್ತು ಸೌಂದರ್ಯಕ್ಕೆ 
ಸಾಕ್ಷಿಯಾಗಿ ಜನ್ಮಿಸಿದಳು ಭೂತಾಯಿ

ಕಾಲಚಕ್ರ ತಿರುಗುತಿರಲು ಕಾಲಕ್ರಮೇಣ 
ಆ ಪರಮಶಿವನ ಚಮತ್ಕಾರದಿಂದ 
ವ್ರುದ್ಧಿಸಿದವು ಅಗಾಧ ಜೀವ ರಾಶಿ 
ಅದರೊಳಗೊಂದು ತ್ರುಣಜೀವ ವಿಕಸುತ 
ಹುಟ್ಟಿತೀ ಮಾನವ ಜಾತಿ.

ಭಾವನೆ ಕಲ್ಪನೆಗಳೆಂಬ 
ವರವೋ ಶಾಪವೋ ತಿಳಿಯದ 
ಶಕ್ತಿಯನ್ ಪಡೆದ ಮಾನವ 
ಪ್ರಕೃತಿಯ ಸಂಘರ್ಷದೊಳು 
ಜಯಿಸಿ ಅಮರನಾದ.

ಸಂಸಾರದೊಳಗೆ ಬೆರೆತು ಮನ 
ಮರೆತು ಹೋಗಿದ್ದ ಮಾನವನಲ್ಲಿ 
ಹುಟ್ಟಿದವು ಅವನತಿಯ ವಂಶರಾಶಿ
ಕಾಮ ಕ್ರೋಧ ಲೋಭ ಮೋಹ 
ಮಧ ಮತ್ಸರರೆಂಬ ಕುಲಪುತ್ರರಿವರು.

ಇದನೋಡಿ ಗಹಗಹಿಸಿ 
ನಕ್ಕಿತಲ್ಲಿ ಅಸುರಲೋಕ, 
ಅಮರ ಸುರರೆಲ್ಲ 
ಹೊಕ್ಕರು ಲಯಕಾರಕನ 
ಸಾನಿಧ್ಯದಡಿಯಲ್ಲಿ.

ಸೃಷ್ಟಿಯ ಅಕ್ಷುವಿನಂತಿರುವ 
ಪೃಥ್ವಿಯ ಅವನತಿಯ ವ್ಯಥೆಯನ್ನು 
ನೋಡಲಾರದೆ ವ್ಯೆಕುಂಠ ಲೋಕದೊಳು 
ಮೊಳಗಿತೊಂದು ಉಪಾಯ 
ಅದುವೇ ಕರ್ಮವೆಂಬ ಮರ್ಮ 

ಸ್ವರ್ಗ ನರಕ ಕರ್ಮಫಲವೆಂಬ 
ವಿಚಾರಧಾರೆಯು ಮಾನವ 
ಭಾವನೆ ಯೋಚನೆಗಳೊಕ್ಕಿತು, 
ಸಂಸಾರ ಮತ್ತೆ ಲಯಬದ್ಧವಾಯಿತು
                                          - ಶಶಾಂಕ್ ಕೆ ಡಿ (೨೦-೦೧-೨೦೧೪)

No comments:

Post a Comment