Sunday, January 4, 2015

ಕನ್ನಡ ೭ - ಗತಿಯ ಮಿತಿ

ಗತಿಯ ಮಿತಿ ತಿಳಿಯದ
ಅತೀತ ಅಮಲಿನೊಳಗೊಂದು
ಮನಸ್ಸು ಮಿಂದು ಮಿಂದು
ಪ್ರಶ್ನೆಗಳು ತೇಲಿ ಬರುತಿರಲು
ಬದುಕು ಸ್ವಪ್ನವೋ
ಸ್ವಪ್ನದೊಳು ಬದುಕೋ
ಅತ್ಮದೊಳು ಪರಮಾತ್ಮನೋ
ಪರಮಾತ್ಮನೊಳು ಅತ್ಮನೋ
ವಿಶ್ವದೊಳು ಸತ್ಯವೋ
ಸತ್ಯದೊಳು ವಿಶ್ವವೋ
ಯೋಚನೆಯೊಳು ಮನಸ್ಸೋ
ಮನಸ್ಸೊಳು ಯೋಚನೆಯೋ
ಪ್ರೇಮದೊಳು ಜೀವವೋ
ಜೀವದೊಳು  ಪ್ರೇಮವೋ
ಸಂತಸದೊಳು ಶಾಂತಿಯೋ
ಶಾಂತಿಯೊಳು ಸಂತಸವೋ
ಶ್ರಮವೇ ಸುಖವೋ
ಸುಖವೇ ಶ್ರಮವೋ
ಜ್ಞಾನಕ್ಕೆ ಸಾವುಂಟೋ
ಸಾವನ್ನರಿತವನೇ ಜ್ಞಾನಿಯೋ
ಇತಿ ಸ್ಥಿತಿಯ ಶಕ್ತಿ
ಅರಿವ ಹಾದಿಯೊಳು
ಹೊರಟೆ ನಾ ಭೂಪತಿ

                                   - ಶಶಾಂಕ್ . ಕೆ . ಡಿ (೧೦-೦೫-೧೪)

ಕನ್ನಡ ೬ - ಶಿವಭಕ್ತಿ

ಅನಂತಾನಂತ ವಿಶ್ವದೊಳು 
ಅಕಾಲ ಮಹಾಕಾಲ ಆದಿನಾಥ
ಮಹಾಯೋಗಿ ಮಹಾದೇವನ
ದಯೆಯನ್ನು ಪಡೆಯುವ ಆನಂದವೇ
ಪರಮಾನಂದ ಬ್ರಹ್ಮಾನಂದ

ನಿನ್ನ ಕೃಪೆಯನ್ನು ಪಡೆದ 
ನಿನ್ನ  ಆಶ್ರಯದೊಳು 
ನಿನ್ನ ಜಪವ ಮಾಡುತಿರುವ
ಶಿವ ಭಕ್ತರಿಗೆ ನಮೋ ನಮಃ 

ಓಂ ನಮಃ ಶಿವಾಯ್ 
ಎಂದಾಗ ಹುಟ್ಟುವ 
ಈ ವಿದ್ಯುತ್ ತರಂಗಗಳ 
ಅನುಭವಿಸುವುದೇ ಸುಯೋಗ

ಭಕ್ತಿಯಿಂದಾದರು ಸರಿ 
ಜ್ಞಾನದಿಂದಾದರು ಸರಿ 
ನಿನ್ನ ಅರೆಸಿ ಬರುವ 
ದೀನ ಆತ್ಮಗಳಿಗೆ 
ನಿನ್ನ ವಿಶಾಲ ಹೃದಯದೊಳು 
ಎಂದೂ ನಿಷೇದವಿಲ್ಲ

ಅಸುರ ಸುರರೆಂಬ ಭೇದವಿಲ್ಲದೆ 
ಭಕ್ತಿಗೆ ಮನಸೋತು 
ಆತ್ಮ ಲಿಂಗವನ್ನೂ ಕೊಟ್ಟ 
ಮಹಾದಾನಿ ನೀನು 

ದೇಹದೊಳು ಜೀವ ತುಂಬಿದಮೇಲೆ 
ಸಾವೊಂದೇ ಸತ್ಯ 
ಅದನ್ನ ಅರಿತವನೇ ನಿನ್ನ ಭಕ್ತ 
ಸದಾ ನಿನ್ನ ನಾಮವ ಜಪಿಸುತ 
ಭಕ್ತಿಯ ಮಾಯೆಯೊಳು 
ಭಾವ ಸಮಾಧಿಯಲ್ಲಿ ಕಳೆದೋದ 
ನಿನ್ನ ಭಕ್ತರಿಗೆ  ಈ 
ಮಹಾಶಿವರಾತ್ರಿಯಲ್ಲಿ  ಮಂಗಳವಾಗಲಿ

                                          - ಶಶಾಂಕ್ ಕೆ ಡಿ (೨೭-೦೨-೧೪)

ಕನ್ನಡ ೫ - ಆಂಜನೇಯ

ಭಕ್ತಿಯ,ಶಕ್ತಿಯ,ಯುಕ್ತಿಯ 
ಪರಮಾವಧಿಯೇ ಅಂಜನಿಸುತ ಆಂಜನೇಯ
ರಾಮನ ಪೂಜಿಸಲೆಂದೇ ಜನಿಸಿದ
ಆ ಶಿವನ ಅವತಾರ ವರ್ಣನಾತೀತ

ಸದಾ ಧ್ಯಾನದೊಳು ಮುಳುಗಿರುವ 
ಧ್ಯಾನಕೇಂದ್ರದದಾವುದು ಎಂದು ಕೇಳಿದ 
ಸತಿಯ ಪ್ರಶ್ನೆಯ ಉತ್ತರವೇ ಮಹಾವಿಷ್ಣು
ಈ ಲೀಲೆಯ ಕಥೆಯೇ ರಾಮಾಯಣ?

ಪರಮೇಶ್ವರನನ್ನು ಸೇರಲು ಅರಿಯಲು 
ಜ್ಞಾನ ಮಾರ್ಗದೊಳು ನಡೆದ ಋಷಿಗಳಿಗೆ
ಭಕ್ತಿ ಮಾರ್ಗದ ಶಕ್ತಿಯನ್ನು 
ತೋರಿಸಲು ಜನ್ಮಿಸಿದೆಯಾ ಭಜರಂಗಿ?

ವಿಶ್ವದೊಳು ಪವಿತ್ರತೆವೆಂಬುದಿದ್ದರೆ 
ಅದು ಹುಟ್ಟುವುದೇ ಆಂಜನೇಯನಿಂದ 
ನಿನ್ನ ಭಕ್ತಿಗೆ ಸಾಟಿಯಿಲ್ಲ 
ನಿನ್ನ ಶ್ರದ್ದೆಗೆ ಮಿತಿಯೇ ಇಲ್ಲ

ನಿನ್ನಂತ ವೀರ ಮತೊಬ್ಬನಿಲ್ಲ
ಋಷಿ ಮುನಿ ದೇವತೆಗಳನ್ನೂ ಬಿಡದ 
ಶನಿಮಹಾತ್ಮನ ವಕ್ರದೃಷ್ಟಿಯನ್ನೂ ಮೀರಿದ 
ಅಮರಾಮರ ಚಿರಂಜೀವಿ ನೀನು 

ನಿನ್ನ ಲೀಲೆ ಅಪಾರ 
ನಿನ್ನ ಶಕ್ತಿ ಅಪಾರ 
ನಿನ್ನ ಭಕ್ತಿ ಅಪಾರ 
ನಿನ್ನ ಚರಣಕಮಲದೊಳು 
ಆಶ್ರಯವನ್ನ್ ನೀಡುವೆಯಾ
ಮಹಾವೀರ ಅಂಜನಿಸುತ ಆಂಜನೇಯ

                         -  ಶಶಾಂಕ್ ಕೆ ಡಿ (೨೭-೦೨-೧೪)

ಕನ್ನಡ ೪ - ಓಂ ಅಹಂ ಆಹುತಿಂ

ವಿವಿಧತೆ,ವಿಕಸನ,ಹೊಸತನಗಳನ್ನು 
ಪ್ರಕೃತಿಯಲ್ಲಿ ತುಂಬಿ 
ಅದನ್ನು ಅರಿಯಲು ಅನುಭವಿಸಲು 
ಪಂಚ ಇಂದ್ರಿಯಗಳನ್ನು ಕೊಟ್ಟು
ಇದನ್ನೇ ಸಂಪೂರ್ಣವೆನಿಸುವ 
ಮಾಯೆಯನ್ ಪಸರಿಸಿ 
ಇಂದ್ರಿಯಗಳು ತಿಳಿಸುವ ಜ್ಞಾನವನೆಲ್ಲಾ
ಅಹಂವೆಂಬ ಅಹಂಕಾರ ಅಂದಕಾರಗಳೊಳಗೆ 
ಬೆರೆಸಿ ಮಾನವ ಕುಲವನ್ನು 
ಕಟ್ಟಿಟ್ಟಿರುವ ಆ ಅಕಾಲನಿಗೆ ನಮನ

ಶರೀರ ಪ್ರಕೃತಿಯದಾದರು 
ಆತ್ಮ ಆ ಪರಮಾತ್ಮನದೆಂದು 
ತಿಳಿಯಲು ಬಿಡದ
ಈ ಅಹಂನ ಲೀಲಾಜಾಲವ
ಭೇದಿಸಿದವನೇ ಜ್ಞಾನಿ 
ಆ ಜ್ಞಾನಿಯ ಮೊದಲ ಮಂತ್ರವೇ 
ಓಂ ಅಹಂ ಆಹುತಿಂ 
ಸ್ವಯಂ ಸಮರ್ಪಂ ಸದಾಶಿವಂ

                               - ಶಶಾಂಕ್ ಕೆ ಡಿ (೨೭-೦೨-೧೪)

ಕನ್ನಡ ೩ - ಮೂಗುತಿ ಸುಂದರಿ

ಪೃಥ್ವಿಯ ವರಪುತ್ರಿನೀ ಹಿರಣಾಕ್ಷಿ
ನಿನ್ನ ನೋಟದ ಕಿರಣಗಳಿಂದ
ಅರಳಿದವೀ ಕಮಲ ಪುಷ್ಪಗಳು
ಮೂಗುತಿ ಸುಂದರಿನೀ
ನಿನ್ನ ಮಾಯೆಯನ್ ಜಯಿಸುವುದುಂಟೆ?

ಕಮಲತೆಯ ಕಮಲಾಂಗಿ ನೀ
ನಿನ್ನ ವಯ್ಯಾರವ ನೋಡಿ
ನಾಚಿದಳು ಹಂಸರಾಣಿ
ನಿನ್ನ ಬಿಂಬವ ನೋಡಿ
ಪ್ರತಿಬಿಂಬವ ಸೃಷ್ಟಿಸಲಾಗದೆ
ಸಪ್ಪಾಯಿತು ಕನ್ನಡಿ

ನಿನ್ನ ಸೌಂದರ್ಯದ ಛಾಯೆಯೊಳು
ಸೋತು,ಮೈಮರೆತು,ಮನಮರೆತು
ಹುಚ್ಚನಾಗಿ ತಿರುಗತಿರುವ ನನ್ನ
ನೋಡಿ ನಿನಗೆ ಕರುಣೆ ಬರಲಿಲ್ಲವೇ?

ಯುಗ ಯುಗವೇ ಕಳೆಯಲಿ
ಸ್ವರ್ಗ ಮೋಕ್ಷವನೆಲ್ಲ ತ್ಯಜಿಸಿ
ಕಾದಿರುವ ನನ್ನನೀ ಮೆಚ್ಚುವುದಿಲ್ಲವೇ?

ನಿನ್ನ ನಗುವೊಂದೇ ಸಾಕು
ನನ್ನ ದಾಸನಾಗಿಸಲು
ನೀ ಬರದಿದ್ದರೂ, ನೀ ಮೆಚ್ಚದಿದ್ದರೂ
ನಿನ್ನ ಕಲ್ಪನೆಯೊಂದೇ ಸಾಕು
ಕಾಲವನ್ ಕಳೆದು ಅಸುನೀಗಲು.

                              - ಶಶಾಂಕ್. ಕೆ. ಡಿ (೨೭-೦೨-೧೪)

ಕನ್ನಡ ೨ - ಕರ್ಮವೆಂಬ ಮರ್ಮ

ಅಖಂಡ ಅಕ್ಷೂಣ ಬ್ರಹ್ಮಾಂಡದೊಳಗಿನ 
ನಿರಂತ ನಿರಾಕರ ನಿಸ್ಸೀಮ ವಿಶ್ವದಲ್ಲಿರುವ 
ಸೌರಮಂಡಲದ ಅಧಿಪತಿ ಸೂರ್ಯದೇವನ 
ಅಭಯ ವರವನ್ನೊತ್ತು ಸೌಂದರ್ಯಕ್ಕೆ 
ಸಾಕ್ಷಿಯಾಗಿ ಜನ್ಮಿಸಿದಳು ಭೂತಾಯಿ

ಕಾಲಚಕ್ರ ತಿರುಗುತಿರಲು ಕಾಲಕ್ರಮೇಣ 
ಆ ಪರಮಶಿವನ ಚಮತ್ಕಾರದಿಂದ 
ವ್ರುದ್ಧಿಸಿದವು ಅಗಾಧ ಜೀವ ರಾಶಿ 
ಅದರೊಳಗೊಂದು ತ್ರುಣಜೀವ ವಿಕಸುತ 
ಹುಟ್ಟಿತೀ ಮಾನವ ಜಾತಿ.

ಭಾವನೆ ಕಲ್ಪನೆಗಳೆಂಬ 
ವರವೋ ಶಾಪವೋ ತಿಳಿಯದ 
ಶಕ್ತಿಯನ್ ಪಡೆದ ಮಾನವ 
ಪ್ರಕೃತಿಯ ಸಂಘರ್ಷದೊಳು 
ಜಯಿಸಿ ಅಮರನಾದ.

ಸಂಸಾರದೊಳಗೆ ಬೆರೆತು ಮನ 
ಮರೆತು ಹೋಗಿದ್ದ ಮಾನವನಲ್ಲಿ 
ಹುಟ್ಟಿದವು ಅವನತಿಯ ವಂಶರಾಶಿ
ಕಾಮ ಕ್ರೋಧ ಲೋಭ ಮೋಹ 
ಮಧ ಮತ್ಸರರೆಂಬ ಕುಲಪುತ್ರರಿವರು.

ಇದನೋಡಿ ಗಹಗಹಿಸಿ 
ನಕ್ಕಿತಲ್ಲಿ ಅಸುರಲೋಕ, 
ಅಮರ ಸುರರೆಲ್ಲ 
ಹೊಕ್ಕರು ಲಯಕಾರಕನ 
ಸಾನಿಧ್ಯದಡಿಯಲ್ಲಿ.

ಸೃಷ್ಟಿಯ ಅಕ್ಷುವಿನಂತಿರುವ 
ಪೃಥ್ವಿಯ ಅವನತಿಯ ವ್ಯಥೆಯನ್ನು 
ನೋಡಲಾರದೆ ವ್ಯೆಕುಂಠ ಲೋಕದೊಳು 
ಮೊಳಗಿತೊಂದು ಉಪಾಯ 
ಅದುವೇ ಕರ್ಮವೆಂಬ ಮರ್ಮ 

ಸ್ವರ್ಗ ನರಕ ಕರ್ಮಫಲವೆಂಬ 
ವಿಚಾರಧಾರೆಯು ಮಾನವ 
ಭಾವನೆ ಯೋಚನೆಗಳೊಕ್ಕಿತು, 
ಸಂಸಾರ ಮತ್ತೆ ಲಯಬದ್ಧವಾಯಿತು
                                          - ಶಶಾಂಕ್ ಕೆ ಡಿ (೨೦-೦೧-೨೦೧೪)

ಕನ್ನಡ ೧ - ಮನಸ್ಸು ಭಾರವಾದಾಗ

ನಿರ್ಭಾವದ ಕಗ್ಗತ್ತಿಲಿನಲ್ಲಿ ಕಳೆದಿದ್ದ
ಮನಸ್ಸೊಂದು ಯೋಚನೆಯ
ಬೆಳಕಿನೆಡೆಗೆ ತೇಲುತ ಹೊರಟಾಗ
ಹೊಮ್ಮಿದವೀ ಪದಗಳು.

ಬಿಟ್ಟರೂ ಹಿಡಿಯಬೇಕಾದ,
ಹಿಡಿದರೂ ನಡೆಯಲಾಗದ ದಾರಿ,
ಸುಂಕವಿಲ್ಲದ ಈ ದಾರಿ,
ದಾರಿಗಿಲ್ಲದ ಅಂತರಾರ್ಥ.

ಕಾಡುವ ಮನಸ್ಸಿದು ಚಿಂತೆಯ
ಸಾಗರದಲ್ಲಿ ಮುಳುಗಲೊರಟಿದೆ,
ಮನಸ್ಸಿಗಿಲ್ಲದ ಆ ಚಾಟಿ,
ಆದನ್ನ ಅರಿಯಲಿಲ್ಲದ ಸಮಯ.

ಭವಿಷ್ಯವಿಲ್ಲದ ಯೋಚನೆ,
ಯೋಚನೆಗಿಲ್ಲದ  ಕಲ್ಪನೆ,
ಕಲ್ಪನೆಗಿಲ್ಲದ ಧೃಡತೆ,
ಧೃಡತೆಗಿಲ್ಲದ ಆಸೆ.

ಆಸೆ ಹುಟ್ಟದಿರುವ ಪರಿಸ್ಥಿತಿ, 
ಪರಿಸ್ಥಿತಿ ಬದಲಿಸಲಾಗದ ನಿಸ್ಸಹಾಯಕತೆ. 
ಹಣೆಬರಹವೆನ್ನಲೋ,ವಿಧಿಯಾಟವೆನ್ನಲೋ,
ತಿಳಿಯದೀ ನಿಘಂಟು.

ಆಟ ಅವನಾಡಿಸುವ ಆಟ,
ಮುಗಿಯಲಾರದೀ ಆಟ,
ಬಿಡಲೆನ್ನದೀ ಆಟ,
ಅದೇ ದೇವರ ಆಟ.

- ಶಶಾ೦ಕ್ . ಕೆ . ಡಿ(೧೬-೦೧-೨೦೧೪)